ಪತಿ ಫಿಲಂಸ್ ಲಾಂಛನದಡಿಯಲ್ಲಿ ಶ್ರೀ ಪಾರ್ಥಸಾರಥಿ, ಗೌತಂ ಸೇಠ್ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ.೧ ಚಿತ್ರದ ಚಿತ್ರೀಕರಣವು ಇದೀಗ ಮೈಸೂರಿನ ಸುತ್ತ ಮುತ್ತ ಎಡಬಿಡದೆ ಸಾಗಿದೆ.
ಚಿತ್ರಕ್ಕಾಗಿ ನೀನನ್ನೊಲವಿಗೆ ನಾವಿಕ
ನೀನನ್ನದೆಯ ಬಾವುಕ ಹಾಗೂ
ಜೀವನಾನೇ ಶ್ಯಾನೇ ಬೇಜಾರು
ಶಿಷ್ಯ ಕೈಕೊಟ್ಟು ನನ್ನ ಲವ್ವರ್ರು ಎಂಬ ಎರಡು ಗೀತೆಗಳನ್ನು
ಮೈಸೂರಿನ ವಿವೇಕನಂದನಗರ ಹಾಗೂ ಡಾಬಾದಲ್ಲಿ ಪ್ರೀತಂ, ಅಮೃತಾ, ಪವನ್ರ ಮೇಲೂ ಹಾಗೂ
ನನ್ನ ಹೆಸರು ವಿಮಲಿ
ಪ್ರೀತಿಲಿ ಕಮಲಿ ಅಂತಾರೆ ನನ್ನನ್ನೆಲ್ಲ ಎಂಬ
ಐಟಂ ಗೀತೆಯನ್ನು ಗ್ರಾಂಡ್ ಮೌರ್ಯ ಹೋಟೆಲ್ನಲ್ಲಿ ಆಲೀಷಾ, ಶರತ್ ಲೋಹಿತಾಶ್ವರ ಮೇಲೆ ರಾಜು, ಫ್ರಾನ್ಸಿಸ್, ನೃತ್ಯ ನಿರ್ದೇಶನದೊಂದಿಗೆ ಶಿವಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ವಿಕ್ರಂ ಚಿತ್ರಿಕರಿಸಿಕೊಂಡರು.
ಚಿತ್ರದ ಚಿತ್ರೀಕರಣವು ಬಹುತೇಕ ಮುಗಿದಿದ್ದು, ಈ ತಿಂಗಳಲ್ಲಿ ಸಂಪೂರ್ಣಗೊಳ್ಳಲಿದೆ ಎಂದು ನಿರ್ಮಾಪಕ ಪಾರ್ಥಸಾರಥಿ ತಿಳಿಸಿದ್ದಾರೆ.
ಚಿತ್ರಕ್ಕೆ ಪಾರ್ಥಸಾರಥಿ ಕಥೆ, ರವಿಶಂಕರ್ನಾಗ್ ಸಂಭಾಷಣೆ, ಶಿವಕುಮಾರ್ ಛಾಯಾಗ್ರಹಣ, ಹರಿಬಾಬು ಸಂಗೀತ, ಮಂಜು ಮೋಹನ್ ಸಾಹಿತ್ಯ, ರಾಜು ನೃತ್ಯ, ವಿಶ್ವ ಸಂಕಲನ, ಬಾಬುಖಾನ್ ಕಲೆ, ವೇಣುಗೋಪಾಲ್ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರಕಥೆ, ಸಾಹಸ ಮತ್ತು ನಿರ್ದೇಶನ ವಿಕ್ರಂ.
ತಾರಾಗಣದಲ್ಲಿ ಪ್ರೀತಂ, ಅಮೃತ, ಶರತ್ ಲೋಹಿತಾಶ್ವ, ಶೋಭರಾಜ್, ಪವನ್, ತಬಲ ನಾಣಿ, ಸಂಗೀತ, ಸೋನು ಮುಂತಾದವರಿದ್ದಾರೆ.